ಗ್ರ್ಯಾಂಡ್ ಡ್ಯೂಕ್

	ಯೂರೋಪಿನಲ್ಲಿ ರಾಜರಿಗೂ ಡ್ಯೂಕರಿಗೂ ನಡುವೆ ಇದ್ದ ಒಂದು ಪದವಿ. ರಷ್ಯದಲ್ಲಿ ರಾಜಮನೆತನದ ಕೆಲವರಿಗೆ ಈ ಪದವಿ ಇತ್ತು. ಪಶ್ಚಿಮ ಯೂರೋಪಿನಲ್ಲಿ ಮೊದಲನೆಯ ಗ್ರ್ಯಾಂಡ್ ಡ್ಯೂಕ್ ಪದವಿ ದತ್ತವಾದ್ದು 1567ರಲ್ಲಿ. ಟಸ್ಕನಿಯ ಕಾಸಿಮೊ ಡಿ ಮೆಡಿಚಿ ಐದನೆಯ ಪಯಸ್ ಪೋಪ್ ಈ ಪದವಿ ದಯಪಾಲಿಸಿದ. ಅವನ ಮಗನಾದ ಫ್ರಾನ್ಸಿಸ್ಕೋನನ್ನು ಗ್ರ್ಯಾಂಡ್ ಎಂದು ಹೋಲಿ ರೋಮನ್ ಸಮ್ರಾಟ ಇಮ್ಮಡಿ ಮಾಕ್ಸಿಮಿಲಿಯನ್ 1576ರಲ್ಲಿ ಮಾನ್ಯ ಮಾಡಿದ. ಈ ಬಿರುದು 18ನೆಯ ಶತಮಾನದಲ್ಲಿ ಟಸ್ಕನಿಯಿಂದ ಹಾಬ್ಸ್‍ಬರ್ಗ್ ಲೊರೈನ್ ಮನೆತನಕ್ಕೆ ಬಂತು.

	ನೆಪೋಲಿಯಾನಿಕ್ ಯುದ್ಧಗಳ ಕಾಲದಲ್ಲಿ ಜರ್ಮನಿ ಹಾಗೂ ಪೂರ್ವ ಯೂರೋಪ್ ರಾಷ್ಟ್ರಗಳ ಪುನವ್ರ್ಯವಸ್ಥೆಯ ವೇಳೆಯಲ್ಲಿ ಅನೇಕ ಗ್ರ್ಯಾಂಡ್ ಡ್ಯೂಕ್ ಪದವಿಗಳು ಹುಟ್ಟಿಕೊಂಡವು. ಈ ವ್ಯವಸ್ಥೆಯಂತೆ ಜೊಕಿಮ್ ಮುರಾತ್‍ಗೆ ಬೆರ್ಗ್, ಚಾರಲ್ಸ್ ಫ್ರೆಡ್ರಿಕ್‍ಗೆ ಬೇಡನ್, ಒಂದನೆಯ ಲೂಯಿಗೆ ಹೆಸ್ಸೆ ಮತ್ತು ಮೂರನೆಯ ಫರ್ಡಿನಾಂಡನಿಗೆ ವeóರ್ïಬರ್ಗ್ ಗ್ರ್ಯಾಂಡ್ ಡಚಿಗಳು 1806ರಲ್ಲಿ ಕೊಡಲ್ಪಟ್ಟವು. ಅಲ್ಲದೆ 1808ರಲ್ಲಿ ವಾರ್ಸಾ ಡಚಿಯನ್ನು ಸ್ಯಾಕ್ಸನಿ ರಾಜ ಫ್ರೆಡ್ರಿಕ್ ಆಗಸ್ಟಸನಿಗೂ 1810ರಲ್ಲಿ ಫ್ರಾಂಕ್‍ಫರ್ಟನ್ನು ಕಾರ್ಲ್ ತಿಯೊಡೋರ್ ಫಾನ್ ಡಾಲ್ಬರ್ಗನಿಗೂ ಅನುಗ್ರಹಿಸಲಾಯಿತು. 1815ರಲ್ಲಿ ನಡೆದ ವಿಯೆನ್ನ ಕಾಂಗ್ರೆಸಿನ ಫಲವಾಗಿ ಡಚಿಗಳ ಪುನವ್ರ್ಯವಸ್ಥೆಯಾಯಿತು. 

	ರಷ್ಯದ ವೆಲಿಕಿ ಕ್ನ್ಯಾeóï ಅಥವಾ ಗ್ರ್ಯಾಂಡ್ ಪ್ರಿನ್ಸ್ ಎಂಬ ಪದವಿಗೆ ಗ್ರ್ಯಾಂಡ್ ಡ್ಯೂಕ್ ಎಂಬ ಪದವನ್ನು ಪರ್ಯಾಯವಾಗಿ ಬಳಸಲಾಗಿದೆ. ರಾಜನನ್ನು ವೆಲಿಕಿ ಕ್ನ್ಯಾeóï ಎಂದು ಕರೆಯಲಾಗುತ್ತಿತ್ತು. ಕೀಯೆಫ್ ರಾಜಕುಮಾರನಿಗೆ ಈ ಬಿರುದು ಇತ್ತು. 12ನೆಯ ಶತಮಾನದ ಉತ್ತರಾರ್ಧದಲ್ಲಿ ವ್ಲಾಡಿಮಿರ್ ರಾಜರು. 14 - 15ನೆಯ ಶತಮಾನಗಳಲ್ಲಿ ಮಸ್ಕೊವಿ, ಟ್ವೆರ್, ರ್ಯಾeóÁನ್, ನಿಷ್ನಿ ನೊವ್‍ಗೊರಾಡ್ ಮತ್ತು ಸ್ಮೊಲೆನ್ಸ್ಕ್ ರಾಜರು ಈ ಬಿರುದನ್ನು ಧರಿಸುತ್ತಿದ್ದರು. ಕಾಲಕ್ರಮದಲ್ಲಿ ಈ ಬಿರುದು ಮಸ್ಕೊವಿ ರಾಜರ ಏಕಸ್ವಾಮ್ಯವಾಯಿತು. 1547ರಿಂದ ಅವರನ್ನು ಟ್ಸಾರ್ ಎಂದು ಕರೆಯಲಾಯಿತು. ಪೀಟರ್ ಮಹಾಶಯ ಇಂಪಿರೇಟರ್ (ಸಮ್ರಾಟ) ಬಿರುದನ್ನು ಧರಿಸಿದ ಮೇಲೆ ರೋಮನೊವ್ ಸಂತತಿಯವರಿಗೆ 1886ರ ವರೆಗೆ ವೆಲಿಕಿ ಕ್ನ್ಯಾeóï ಬಿರುದು ಸಲ್ಲುತ್ತಿತ್ತು. ಅನಂತರ ಇದು ಸಮ್ರಾಟನ ಗಂಡುಮಕ್ಕಳು, ಹೆಣ್ಣುಮಕ್ಕಳು, ಸೋದರರು, ಸೋದರಿಯರು ಮತ್ತು ಮೊಮ್ಮಕ್ಕಳಿಗೆ ಮೀಸಲಾಯಿತು. ಗ್ರ್ಯಾಂಡ್ ಡ್ಯೂಕ್ ಬಿರುದು ಇಂಗ್ಲೆಂಡಿನಲ್ಲೂ ಬಳಕೆಯಲ್ಲಿತ್ತು.						   (ಎಚ್.ವಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ